ಕಡಿಮೆ ಬೆಲೆಗೆ ಫೋನ್ ಖರೀದಿಸಬೇಕೆ? ಇಲ್ಲಿದೆ Best options

 ಈ ದಿನಗಳಲ್ಲಿ, ಉತ್ತಮ ಫೀಚರ್ ಗಳನ್ನು ಹೊಂದಿರುವ ಸ್ಮಾರ್ಟ್ ಪೋನ್ ಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಇದರಲ್ಲಿ ಶಕ್ತಿಯುತ ಬ್ಯಾಟರಿ, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಪವರ್ ಫುಲ್ ಪ್ರೊಸೆಸರ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ.

Written by - Ranjitha R K | Last Updated : May 23, 2021, 12:49 PM IST
  • ಉತ್ತಮ ಫೀಚರ್ ಗಳನ್ನು ಹೊಂದಿರುವ ಸ್ಮಾರ್ಟ್ ಪೋನ್ ಗಳು ಕಡಿಮೆ ಬೆಲೆಗೆ ಸಿಗುತ್ತಿದೆ
  • ನಿರಂತರವಾಗಿ ಮಿಡ್ ರೇಂಜ್ ನ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ
  • ಅಗ್ಗದ ಬೆಲೆಗೆ ಸ್ಮಾರ್ಟ್ಫೋನ್ ಖರೀದಿ ಮಾಡಬೇಕಾದರೆ ಯಾವುದು ಬೆಸ್ಟ್ ತಿಳಿಯಿರಿ
ಕಡಿಮೆ ಬೆಲೆಗೆ ಫೋನ್ ಖರೀದಿಸಬೇಕೆ? ಇಲ್ಲಿದೆ Best options title=
ಅಗ್ಗದ ಬೆಲೆಗೆ ಸ್ಮಾರ್ಟ್ಫೋನ್ ಖರೀದಿ ಮಾಡಬೇಕಾದರೆ ಯಾವುದು ಬೆಸ್ಟ್ ತಿಳಿಯಿರಿ (file photo)

ನವದೆಹಲಿ : ಈ ದಿನಗಳಲ್ಲಿ, ಉತ್ತಮ ಫೀಚರ್ ಗಳನ್ನು ಹೊಂದಿರುವ ಸ್ಮಾರ್ಟ್ ಪೋನ್ ಗಳು (Samrtphone) ಕಡಿಮೆ ಬೆಲೆಗೆ ಸಿಗುತ್ತಿದೆ. ಇದರಲ್ಲಿ ಶಕ್ತಿಯುತ ಬ್ಯಾಟರಿ, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಪವರ್ ಫುಲ್ ಪ್ರೊಸೆಸರ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ.  Samsung, Oppo  ಮತ್ತು Realme ಸೇರಿದಂತೆ ಹೆಚ್ಚಿನ ಜನಪ್ರಿಯ ಕಂಪನಿಗಳು ನಿರಂತರವಾಗಿ ಮಿಡ್ ರೇಂಜ್ ನ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ (Indian Market) ಬಿಡುಗಡೆ ಮಾಡುತ್ತಿವೆ. ಕಡಿಮೆ ಬೆಲೆಗೆ ಉತ್ತಮ ಫೀಚರ್ ಗಳಿರುವ ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದರೆ ಯಾವುದು ಉತ್ತಮ ಆಯ್ಕೆ ಎಂಬುದನ್ನು ತಿಳಿಯಿರಿ.. 

Samsung Galaxy M42 5G : 
Samsung Galaxy M42 5G  6.6 ಇಂಚಿನ Super AMOLED ಡಿಸ್ಪ್ಲೇ, Qualcomm Snapdragon 750 ಜಿ ಪ್ರೊಸೆಸರ್, 6 ಜಿಬಿ RAM, 128 ಜಿಬಿ ಸ್ಟೋರೇಜ್ ಮತ್ತು 5000 ಎಂಎಹೆಚ್ ಬ್ಯಾಟರಿಯೊಂದಿಗೆ ಬರುತ್ತದೆ. ಇದು 48 MP ಪ್ರೈಮರಿ ಕ್ಯಾಮೆರಾ ಜೊತೆಗೆ ಇತರ ಮೂರು ಸೆನ್ಸಾರ್  ಮತ್ತು ಸೆಲ್ಫಿಗಾಗಿ 20 MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬೆಲೆ 21,999 ರೂ. ಆದರೆ, ಇದೀಗ ಅದನ್ನು ಆಫರ್‌ನೊಂದಿಗೆ 18,499 ರೂಗಳಿಗೆ ಖರೀದಿಸಬಹುದು.

ಇದನ್ನೂ ಓದಿ : Google Search History ಡಿಲೀಟ್ ಮಾಡಲು ನ್ಯೂ ಫೀಚರ್: ಬಳಸುವುದು ಹೇಗೆ ?

Realme X7 5G :
Realme X7 5G  6.43 ಇಂಚಿನ ಸೂಪರ್ ಅಮೋಲೆಡ್ (Super AMOLED ) ಡಿಸ್ಪ್ಲೇ, 4310mAh ಬ್ಯಾಟರಿ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 800 ಯು (MediaTek Dimensity 800U) ಪ್ರೊಸೆಸರ್ ಹೊಂದಿದೆ. ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು,ಪ್ರೈಮೆರಿ ಕ್ಯಾಮೆರಾ 64 MPಯದ್ದಾಗಿದೆ.   ಈ ಫೋನ್‌ನಲ್ಲಿ 16 ಎಂಪಿ ಫ್ರಂಟ್ ಕ್ಯಾಮೆರಾ ಇದೆ. Realme X7 5G ಯ ಒಂದು ರೂಪಾಂತರವು 6 ಜಿಬಿ RAM ನೊಂದಿಗೆ 128 ಜಿಬಿ ಸ್ಟೋರೇಜ್ ಅನ್ನು ಒಳಗೊಂಡಿದೆ. ಇನ್ನೊಂದು, 8 ಜಿಬಿ RAM ನೊಂದಿಗೆ 128 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆ 19,999 ರೂ. ಆದರೆ, ಪ್ರಸ್ತುತ ಈ ಪೋನ್ 17,999 ರೂಗಳಿಗೆ ಲಭ್ಯವಿದೆ.

Oppo F19 : 
Oppo F19 ಸ್ಮಾರ್ಟ್‌ಫೋನ್ 6.43 ಇಂಚಿನ ಡಿಸ್ಪ್ಲೇ, 5000 mAh ಬ್ಯಾಟರಿ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಪ್ರೊಸೆಸರ್, 6 ಜಿಬಿ RAM ನೊಂದೊಗೆ 128 ಜಿಬಿ ಸ್ಟೋರೇಜ್ ಹೊಂದಿದೆ.  ಈ ಪೋನ್ ಪ್ರೈಮೆರಿ ಸೆನ್ಸಾರ್ ಜೊತೆಗೆ 48MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು  ಹೊಂದಿದೆ. ಇದಲ್ಲದೆ 16 ಎಂಪಿ ಫ್ರಂಟ್ ಕ್ಯಾಮೆರಾ ಕೂಡಾ ಇದೆ. ಇದರ ಬೆಲೆ 18,990 ರೂಗಳಾಗಿವೆ.

ಇದನ್ನೂ ಓದಿ : ಸ್ಮಾರ್ಟ್ ಫೋನಿನಲ್ಲಿ Instagram Reels ಡೌನ್ ಲೋಡ್ ಮಾಡುವ ಸರಳ ವಿಧಾನ ತಿಳಿಯಿರಿ

Poco X3 Pro : 
Poco X3 Pro  6.67 ಇಂಚಿನ ಡಿಸ್ಪ್ಲೇ ಹೊಂದಿದ್ದು, 8 ಜಿಬಿ ವರೆಗೆ RAM , 128 ಜಿಬಿ ಸ್ಟೋರೇಜ್, 5160 mAh ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 860 ಪ್ರೊಸೆಸರ್ ಹೊಂದಿದೆ. ಇದು 48 MP ಪ್ರೈಮೆರಿ  ಕ್ಯಾಮೆರಾ ಮತ್ತು 20 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರ ಆರಂಭಿಕ ಬೆಲೆ 18,999 ರೂ.

Xiaomi Redmi Note 10 Pro Max :
Xiaomi Redmi Note 10 Pro Max ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ, 5020 ಎಂಎಹೆಚ್ ಬ್ಯಾಟರಿ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732 ಜಿ ಪ್ರೊಸೆಸರ್, 128 ಜಿಬಿ ಸ್ಟೋರೇಜ್ ಮತ್ತು 8 ಜಿಬಿ RAM ಹೊಂದಿದೆ. ಈ ಫೋನ್‌ನಲ್ಲಿ ಕಂಪನಿಯು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಿದ್ದು, ಇದು 108 MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. 16 MP ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್‌ನ ಬೆಲೆ 18,999 ರೂ.

ಇದನ್ನೂ ಓದಿ : face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News